ಟಿಪ್ಪು (ಜನನ 1 ನವೆಂಬರ್ 1978) ಎಂಬ ಹೆಸರಿನಿಂದ ಪ್ರಸಿದ್ಧರಾಗಿರುವ ಏಕಾಂಬರೇಶ್ ಲಕ್ಷ್ಮಿ ನಾರಾಯಣನ್ ಅವರು ಭಾರತೀಯ ಹಿನ್ನೆಲೆ ಗಾಯಕರಾಗಿದ್ದಾರೆ , ಅವರು ತಮಿಳು, ಕನ್ನಡ, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ 4000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. == ಬದುಕು == ಟಿಪ್ಪು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಮುಂತಾದ ವಿವಿಧ ಭಾಷೆಗಳಲ್ಲಿ 4000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ . ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಡಾ.ವಿಷ್ಣುವರ್ಧನ್ ಮತ್ತು ರಜನಿಕಾಂತ್ ಅವರಂತಹ ದಕ್ಷಿಣ ಭಾರತದ ಸೂಪರ್ ಸ್ಟಾರ್‌ಗಳು ನಟಿಸಿದ ಚಿತ್ರಗಳಿಗೆ ಅವರು ತಮ್ಮ ಧ್ವನಿಯನ್ನು ನೀಡಿದ್ದಾರೆ. ಅವರು ದಕ್ಷಿಣ ಭಾರತದ ಅನೇಕ ತಾರೆಗಳಿಗೆ ಹಾಡಿದ್ದಾರೆ, ಆದರೆ ಕನ್ನಡದ ಸೂಪರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರೊಂದಿಗಿನ ಅವರ ಕಾಂಬಿನೇಷನ್ ಗೆ ಪ್ರೇಕ್ಷಕರು ಮನಸೋತಿದ್ದಾರೆ. ಈ ಜೋಡಿಯು ಚಿತ್ರರಂಗಕ್ಕೆ ಹಲವು ಹಿಟ್ ಹಾಡುಗಳನ್ನು ನೀಡಿದೆ. ಜಾಕಿ ಚಿತ್ರದ 'ಶಿವ ಅಂತ ಹೋಗುತಿದ್ದೆ' , ಪರಮಾತ್ಮ ಚಿತ್ರದ' ಯಾವನಿಗ್ ಗೊತ್ತು' , ರಾಜ್ ಚಿತ್ರದ ' ಹೇ ಹೇ ಪಾರೊ ' ,ಪೃಥ್ವಿ ಚಿತ್ರದ ' ಹೆಜ್ಜೆಗೊಂದು ಹೆಜ್ಜೆ ' ಮತ್ತು ರಾಮ್ ಚಿತ್ರದ ' ಲೇ ಲೇ ' ಹಾಡುಗಳು ಪ್ರಮುಖ ಹಿಟ್ ಆಗಿವೆ. ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರೊಂದಿಗಿನ ಇವರ ಕಾಂಬಿನೇಷನ್ ಬಹಳ ಜನಪ್ರಿಯವಾಗಿದೆ. . == ಕನ್ನಡ ಹಾಡುಗಳ ಪಟ್ಟಿ == == ಪ್ರಶಸ್ತಿಗಳು == 2010 ರಲ್ಲಿ, ಟಿಪ್ಪು ಅತ್ಯುತ್ತಮ ಹಿನ್ನೆಲೆ ಗಾಯಕರಿಗಾಗಿ ಇರುವ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ರಾಜ್ ದಿ ಶೋಮ್ಯಾನ್ ಚಿತ್ರದ "ಹೇ ಪಾರು" ಹಾಡಿಗೆ ಕನ್ನಡ ಚಲನಚಿತ್ರೋದ್ಯಮದ ಉನ್ನತ ಸಂಗೀತ ಸಂಯೋಜಕ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದರು . 2007 ರಲ್ಲಿ ತಮಿಳು ನಾಡು ಸರ್ಕಾರದ ಕಲೈಮಾಮಣಿ ಪ್ರಶಸ್ತಿಯನ್ನು ಟಿಪ್ಪು ಅವರಿಗೆ ನೀಡಲಾಯಿತು == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ [೧] ಟಿಪ್ಪುವಿನ ಧ್ವನಿಮುದ್ರಿಕೆಗಳು 2013-02-18 .